Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಾಮಾಜಿಕ ಕಳಕಳಿಯ ಚಿತ್ರ ಸತ್ಯಂ ಶಿವಂ
Posted date: 04 Sun, Feb 2024 05:17:21 AM
ಚಿತ್ರ: ಸತ್ಯಂ ಶಿವಂ
ನಿರ್ದೇಶನ:: ಯತಿರಾಜ್
ತಾರಾಗಣ: ಬುಲೆಟ್ ರಾಜು, ಸಂಜನಾ ನಾಯ್ಡು, ಯತಿರಾಜು, ಕಾಮಿಡಿ ಕಿಲಾಡಿ ಸಂತೂ, ಅರವಿಂದ ರಾವ್, ಬಾಲರಾಜವಾಡಿ, ಸುಂದರಶ್ರೀ, ಸಂಗೀತ, ವೀಣಾ ಸುಂದರ್, ಮುನಿ ಮತ್ತಿತರರು
ರೇಟಿಂಗ್: * 3/5

ಸಿನಿಮಾ ಪತ್ರಕರ್ತರಾಗಿ,ಕಲಾವಿದರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಯತಿರಾಜ್ ನಿರ್ದೇಶನ ಮಾಡಿರುವ ಸತ್ಯಂ ಶಿವಂ ಚಿತ್ರ ತೆರೆಗೆ ಬಂದಿದೆ.
 
ನಿರ್ದೇಶನದ ಜೊತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ತಾವು ಯಾವುದೇ ರೀತಿಯ ಕಥೆ ನಿಬಾಯಿಸುವ ಸಾಮರ್ಥ್ಯವು ಇದೆ ಎನ್ನುವದನ್ನು ನಿರೂಪಿಸಿದ್ದಾರೆ.
 
ಚಿತ್ರ ಜನರ ಮನಗೆಲ್ಲವು ಏನೆಲ್ಲಾ ಬೇಕೋ ಆ ಕೆಲಸವನ್ನು ನಿರ್ದೇಶಕ ಯತಿರಾಜ್ ಶ್ರದ್ದೆ ವಹಿಸಿ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ.  ನಾಯಕನ ಬಳಿ ನಟನೆಯ ತೆಗಿಸಿಸಿದ್ಸಾರೆ. ಈ ಮೂಲಕ ಒಳ್ಳೆಯ  ಶಿಲ್ಪಿಗೆ ಎಂತಹ ಕಲ್ಲುನ್ನೂ ಕೆತ್ತಿ ಸುಂದರ ಮೂರ್ತಿ ಮಾಡಬಹುದು ಎನ್ನುವುದನ್ನು ನಿರ್ದೇಶಕರು ತೋರಿಸಿಕೊಟ್ಟಿದ್ದಾರೆ.
 
ರೌಡಿ ಕಾಳಿ ಪ್ರಸಾದ್- ಬುಲೆಟ್ ರಾಜು, ಮಾಲೀಕ ನೀಡುವ ಯಾವುದೇ ಕೆಲಸವನ್ನು ಮರು ಮಾತನಾಡದೆ  ನೀರು ಕುಡಿದಷ್ಟು ಸಲೀಸಲು, ಕೊಲೆ, ಇವನಿಗೆ ಮಾಮೂಲು, ಇಂತಹ ವ್ಯಕ್ತಿ ಬದುಕಲ್ಲಿ ಅಚಾನಕ್ ಆಗಿ ವಿಜಯ್ - ಯತಿರಾಜ್ ಪ್ರವೇಶವಾಗುತ್ತದೆ. ಕ್ಯಾನ್ಸರ್ ನಿಂದ ಬದುಕು ಬೇಡ ಎಂದುಕೊಂಡ ವ್ಯಕ್ತಿ ಅತ. ಸಂಬಂದವಿಲ್ಲದಿದ್ದರೂ ತಮ್ಮವರಂತೆ ನೋಡುವ ದೊಡ್ಡಗುಣ ಕಾಳಿಯದು.
 
ಈತನನ್ನು ನೋಡಿಕೊಳ್ಳಲು ಬರುವ ನರ್ಸ್ - ಸಂಜನಾ ನಾಯ್ಡು ಮೇಲೆ ಕಾಳಿಗೆ ಗೊತ್ತಿಲ್ಲದೆ ಪ್ರೀತಿಯಾಗಿ ಬಿಡುತ್ತದೆ. ತಾನು ಮಾಡುವ. ಕೆಲಸ ಬಿಟ್ಟರು ಒಳ್ಳೆಯ ವ್ಯಕ್ತಿಯಾಗಲು ಮುಂದಾಗುತ್ತಾನೆ.ಆತ ಒಳ್ಳೆಯವನಾದರೂ ಸಮಾಜ ಬಿಡುವುದಿಲ್ಲ ಎನ್ನುವ ಧಾರುಣ ಕಥೆ ಚಿತ್ರದ ಹೈಲೈಟು.
 
ನಾಯಕ ಬುಲುಟ್ ರಾಜು ಅವರನ್ನು ಸಿನಿಮಾ ಶೈಲಿಗೆ ಒಗ್ಗಿಸಿಕೊಳ್ಳಲು ನಿರ್ದೇಶಕ ಯತಿರಾಜ್ ಕಷ್ಡಪಟ್ಟಿರುವುದು ಎದ್ದು ಕಾಣುತ್ತದೆ. ಅದರ ಸಂಪೂರ್ಣ ಶ್ರೇಯ ಅವರಿಗೆ ಸಲ್ಲಲಿದೆ. ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರದಲ್ಲಿ ಯತಿರಾಜು ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದುವರೆಗಿನ ಅವರ ಚಿತ್ರ ಜೀವನದಲ್ಲಿ ಉತ್ತಮ ಪಾತ್ರ. ‌
 
ಹಿರಿಯ ಕಲಾವಿದರಾದ  ಸಂಗೀತಾ, ಅರವಿಂದ್ ರಾವ್, ಮೈಕೋ ನಾಗರಾಜು, ವೀಣಾ ಸುಂದರ್, ಸುಂದರಶ್ರೀ ಪಾತ್ರಕ್ಕೆ ಜೀವ ತುಂಬಿದ್ದಾರೆ.
 
ಉಳಿದಂತೆ ಚೇತನ್, ಸೇರಿದಂತೆ ಪ್ರತಿಯೊಂದು ಪಾತ್ರವೂ ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಈ ಮೂಲಕ ಸಾಮಾಜಿಕ ಕಳಕಳಿಯ ಚಿತ್ರವನ್ನು ತೆರೆಗೆ ಕಟ್ಟಿಕೊಟಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಾಮಾಜಿಕ ಕಳಕಳಿಯ ಚಿತ್ರ ಸತ್ಯಂ ಶಿವಂ - Chitratara.com
Copyright 2009 chitratara.com Reproduction is forbidden unless authorized. All rights reserved.